top of page
ppst_header.PNG
ppst_sidebar.PNG

20-8-2021

ಪತ್ರಿಕಾ ಪ್ರಕಟಣೆ

ಕೋವಿಡ್ ಚಿಕಿತ್ಸೆಯಲ್ಲಿ ದೇಶೀಯ ವೈದ್ಯಕೀಯ ಪದ್ಧತಿಗಳ ಸಂಪೂರ್ಣ ಮತ್ತು ಪರಿಣಾಮಕಾರಿ ಬಳಕೆಯ ಬಗ್ಗೆ ಭಾರತದ ಪ್ರಧಾನಮಂತ್ರಿಗಳಿಗೆ  ಮನವಿ

ಸುಮಾರು 700 ಹಿರಿಯ ವಿಜ್ಞಾನಿಗಳು, ತಂತ್ರಜ್ಞಾನಿಗಳು ಹಾಗೂ ದೇಶೀಯ ಪದ್ಧತಿಗಳ ವೈದ್ಯರು  ಕೋವಿಡ್ 19ನ್ನು ತಡೆಗಟ್ಟಲು ಹಾಗೂ ಗುಣಪಡಿಸಲು ದೇಶೀಯ ವೈದ್ಯಕೀಯ ಪದ್ಧತಿಗಳನ್ನು ಸಂಪೂರ್ಣ ಮತ್ತು ಪರಿಣಾಮಕಾರಿಯಾದ ರೀತಿಯಲ್ಲಿ ಬಳಸಬೇಕೆಂದು ಕೋರಿ ಪ್ರಧಾನಮಂತ್ರಿಗಳಿಗೆ ಮನವಿಯೊಂದನ್ನು ಸಲ್ಲಿಸಿದ್ದಾರೆ. ಈ ಮನವಿಯನ್ನು ಪಿ.ಪಿ.ಎಸ್.ಟಿ. ಸಮೂಹವು ಆರಂಭಿಸಿದ್ದು, ಇದನ್ನು ಅನುಮೋದಿಸಿದವರಲ್ಲಿ 11 ಪದ್ಮಶ್ರೀ ಹಾಗೂ 3 ಪದ್ಮವಿಭೂಷಣ ಪ್ರಶಸ್ತಿ ವಿಜೇತರು ಇದ್ದಾರೆ.

ಈ ಮನವಿಯ ವಿಶೇಷವೆಂದರೆ ಇದನ್ನು ಅನುಮೋದಿಸಿದವರಲ್ಲಿ 210 ಪಿ.ಎಚ್.ಡಿ. ಪದವೀಧರರು – ಅವರಲ್ಲೂ ಬಹುಮಂದಿ ವಿಜ್ಞಾನ-ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್ ವಿಶೇಷಜ್ಞರು – ಇದ್ದಾರೆ. ಅಲ್ಲದೆ ದೇಶದ ವಿವಿಧೆಡೆಗಳಿಂದ, ತಮಿಳುನಾಡಿನ 46 ಸಿದ್ಧವೈದ್ಯರನ್ನು ಒಳಗೊಂಡು, 300 ದೇಶೀಯ ಪದ್ಧತಿಗಳ ವೈದ್ಯರೂ ಇದ್ದಾರೆ. ವೈದ್ಯವೃತ್ತಿಪರರಲ್ಲಿ ಬಹುಪಾಲು ತಜ್ಞರು ಕಳೆದ ಒಂದು ವರ್ಷದ ಸಮಯದಲ್ಲಿ ಹಲವಾರು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಮಾಡಿರುತ್ತಾರೆ. ಮೇಲಾಗಿ ಈ ಪಟ್ಟಿಯಲ್ಲಿ 20 ಹಿರಿಯ ಆಧುನಿಕ ಅಲೋಪಥಿ ವೈದ್ಯರು ಸಹಾ ಸೇರಿರುತ್ತಾರೆ.


ಈ ಮನವಿಯನ್ನು ಅನುಮೋದಿಸಿದ ಬಹುಪಾಲು  ವ್ಯಕ್ತಿಗಳು ತಮ್ಮ ತಮ್ಮ ಕಾರ್ಯಕ್ಷೇತ್ರದಲ್ಲಿ ಮುಂದಾಳುಗಳಾಗಿದ್ದು, ಅವರಲ್ಲಿ ಕೆಲವರು (ನಿವೃತ್ತ ಅಥವಾ ಕಾರ್ಯನಿರತ)  ಪ್ರತಿಷ್ಠಿತ ಸಂಸ್ಥೆಗಳ ನಿರ್ದೇಶಕರು, ಉಪಕುಲಪತಿಗಳು, ಗಣ್ಯ ಪ್ರಾಧ್ಯಾಪಕರು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯದರ್ಶಿಗಳು ಮತ್ತು ಮುಖ್ಯ ಕಾರ್ಯದರ್ಶಿಗಳು ಕೂಡ ಸೇರಿದ್ದಾರೆ.

 

ಈ ಅರಿಕೆಯಲ್ಲಿ ಕೋವಿಡ್ 19 ಅನ್ನು ನಿಯಂತ್ರಿಸಲು ಹಾಗೂ ಗುಣಪಡಿಸಲು ದೇಶೀಯ ಚಿಕಿತ್ಸಾ ವಿಧಾನಗಳನ್ನು ಯಶಸ್ವಿಯಾಗಿ ಉಪಯೋಗಿಸಿರುವ ಹಲವಾರು ಪ್ರಯೋಗಗಳನ್ನು ನಮೂದಿಸಲಾಗಿದೆ. ಈ  ಪ್ರಯೋಗಗಳಲ್ಲಿ ದೇಶದ ವಿವಿಧ ಪ್ರದೇಶಗಳ ಸರ್ಕಾರೀ ಸಂಸ್ಥೆಗಳಲ್ಲದೇ ಖಾಸಗೀ ದೇಶೀಯ ವೈದ್ಯವೃತ್ತಿಪರರು ಕೂಡ ಭಾಗಿಗಳಾಗಿರುತ್ತಾರೆ. ಮೇಲೆ ಉಲ್ಲೇಖಿಸಿದ ಪ್ರಯೋಗಗಳ ಯಶಸ್ಸಿನ ಆಧಾರದ ಮೇಲೆ ದೇಶೀಯ ಚಿಕಿತ್ಸಕ ವಿಧಾನಗಳನ್ನು ನಮ್ಮ ದೇಶದ ವ್ಯವಸ್ಥಿತ ಆರೋಗ್ಯ ಪದ್ಧತಿಗಳೊಂದಿಗೆ ಒನ್ದುಗೂಡಿಸಬೇಕೆಂದೂ, ಮತ್ತುಭಾರೀ ಪ್ರಮಾಣದಲ್ಲಿ ದೇಶೀಯ ವೈದ್ಯಕೀಯ ವಿಧಾನಗಳನ್ನು ಉಪಯೊಗಿಸಿದಾಗ ಮಾತ್ರವೇ ಈ ದೇಶದ ಅಪಾರ ಜನಸಂಖ್ಯೆಗೆ ಅತಿಸಮರ್ಪಕವಾದ ಚಿಕಿತ್ಸೆಗಳನ್ನು ಒದಗಿಸಬಹುದು ಎನ್ದೂ ಈ ಅರಿಕೆಯು ಪ್ರತಿಪಾದಿಸುತ್ತದೆ. ಅಲ್ಲದೇ ಈ ಮೂಲಕ ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳು ಕೂಡ ಪರಿಪೂರ್ಣಗೊಣ್ಡು ಹೆಚ್ಚು ಪರಿಣಾಮಕಾರಿಯಾಗುವ ಸಾಧ್ಯತೆ ಇದೆ. ದೇಶೀಯ ವೈದ್ಯಕೀಯಪದ್ಧತಿಗಳ ವ್ಯಾಪಕ ಉಪಯೋಗದಿಂದಾಗುವ ಮತ್ತೊಂದು ಫಲವೆಂದರೆ ಅವುಗಳ ಕಾರ್ಯಕ್ಷಮತೆ ಮತ್ತು ಪರಿಣಾಮಗಳ ಬಗ್ಗೆ ದೊರಕುವ ವಿಸ್ತಾರವಾದ ಮಾಹಿತಿ. ಈ ಮಾಹಿತಿಯನ್ನು ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸಿದಾಗ ಈ ಪದ್ಧತಿಗಳ ಸುರಕ್ಷತೆ ಹಾಗೂ ಸಾಮರ್ಥ್ಯಗಳ ಬಗ್ಗೆ ವಸ್ತುನಿಷ್ಠ  ಹಾಗೂ ವೈಜ್ಞಾನಿಕವಾದ ಖಚಿತ ನಿರ್ಣಯಗಳು ದೊರೆಯುವುವೆಂದು ಅಪೇಕ್ಷಿಸಬಹುದು.

ಈ ಮನವಿಯನ್ನು ಯೋಜಿಸಿದವರು ಪಿ. ಪಿ. ಎಸ್. ಟಿ. (Patriotic and People-oriented Science and Technology) ದೇಶಭಕ್ತ ಮತ್ತು ಜನಪರ ವಿಜ್ಞಾನ ಮತ್ತು ತಂತ್ರಜ್ಞಾನ ಸಮೂಹ. ಈ ಸಮೂಹವು 1980ರ ದಶಕದಲ್ಲಿ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಸಕ್ರಿಯವಾಗಿಸಿ ಸಾಮಾಜಿಕ ಅವಶ್ಯಕತೆಗಳಿಗೆ ಕೊಂಡಿಹಾಕಿ ಬೆಳೆಸುವ ಉದ್ದೇಶವನ್ನುತಾಳಿದ ಸಹೃದಯೀ ವಿಜ್ಞಾನಿ, ತಂತ್ರಜ್ಞಾನಿಗಳನ್ನು ಒಳಗೊಂಡು ಜೀವ ತಳೆಯಿತು. ಈ ಪ್ರಕ್ರಿಯೆಯಲ್ಲಿ ಭಾರತೀಯ ಪಾರಂಪರಿಕ ವೈಜ್ಞಾನಿಕ ಹಾಗೂ ತಂತ್ರಜ್ಞಾನಗಳಲ್ಲಿ ಅಡಕವಾಗಿರುವ ಅರಿವು ಜ್ಞಾನಗಳು ಹಾಗೂ ಆಚರಣೆಗಳು ನಮ್ಮ ದೇಶದ ಪುನಶ್ಚೇತನದ ಆಧಾರ ಸ್ತಂಭಗಳೆಂದು ಅರಿತ ಈ ಸಮೂಹದ ಸದಸ್ಯರು ಪಾರಂಪರಿಕ ಭಾರತೀಯ ವಿಜ್ಞಾನ-ತಂತ್ರಜ್ಞಾನಗಳ ಇತಿಹಾಸ, ಜ್ಞಾನ-ಮೀಮಾಂಸೆ, ಆಚರಣೆ ಹಾಗೂ ಅವುಗಳ ವ್ಯಾವಹಾರಿಕ ದಕ್ಷತೆಗಳನ್ನು ಆಳವಾಗಿ ಸಂಶೋಧಿಸಿ ಹಲವಾರು ಪ್ರಕಟಣೆಗಳನ್ನು ಹೊರತಂದಿದ್ದಾರೆ.



ಈ ಮನವಿಗೆ ದೇಶದಾದ್ಯಂತ ಹಲವಾರು ಕ್ಷೇತ್ರಗಳಲ್ಲಿ ಉನ್ನತಸ್ತರದಲ್ಲಿರುವ ಬರ್ದುಗರ ಬೆಂಬಲವನ್ನು ನೋಡಿದಾಗ ದೇಶೀಯ ವೈದ್ಯಕೀಯ ಪದ್ಧತಿಗಳನ್ನು ದೇಶದ ಸಂಘಟಿತ ಚಿಕಿತ್ಸಕ ವ್ಯವಸ್ಥೆಯಲ್ಲಿ ತಕ್ಷಣವೇ ಸೇರಿಸಬೇಕೆಂಬ ಆಶಯವು ವ್ಯಾಪಕವಾಗಿ ಕಾಣಬರುತ್ತಿದೆ. ಈಗ ದೇಶ ಎದುರಿಸುತ್ತಿರುವ ಮಹಾ ಸಂಕಟದ ಸಮಯವು ದೊಡ್ಡ ಅವಕಾಶವು ಕೂಡ ಆಗಿದೆ ಎಂಬುದು ಹಲರ ಅಭಿಮತ. ಇಂದು ದೇಶೀಯ ವೈದ್ಯಕೀಯ ಮತ್ತು ಆರೋಗ್ಯಪಾಲನಾ ಸಂಪ್ರದಾಯಗಳನ್ನು ಔಪಚಾರಿಕ ವೈದ್ಯಕೀಯ ವ್ಯವಸ್ಥೆಗಳಲ್ಲಿ ಬೆಸೆಯುವ ವಿರಳ ಅವಕಾಶ ನಮ್ಮ ಮುಂದಿದೆ. ಈ ಮನವಿಯ ಸಹಿಕಾರರು ದೇಶವು ಈ ಅವಕಾಶವನ್ನು ಸಂಪೂರ್ಣವಾಗಿ ಉಪಯೋಗಿಸಿ ಏಕಮತದಿಂದ ಮುಂದೆಸಾಗಲೆಂದು ಬಯಸುತ್ತಾರೆ.

ಗೌರವಪೂರ್ಣವಾಗಿ

ಪಿ. ಎಲ್. ಟಿ. ಗಿರಿಜಾ

ಸಂಜೀವನಿ ಆಯುರ್ವೆದ ವೈದ್ಯಶಾಲಾ

1/341, ಗಂಗೈ ಅಮ್ಮನ್ ಸ್ಟ್ರೀಟ್

ಇಂಜಂಬಾಕ್ಕಮ್, ಚೆನ್ನೈ 600115

ಮೊ: 9500071332

ಈಮೈಲ್:pltgirija@gmail.com

plt_girija_signature.png
bottom of page